* ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 2024ನೇ ಸಾಲಿನ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ಕ್ಕೆ ಗುಜರಾತಿ ಲೇಖಕಿ ಹಿಮಾಂಶಿ ಇಂದೂಲಾಲ್ ಶೆಲತ್ ಆಯ್ಕೆಯಾಗಿದ್ದಾರೆ.* ಈ ಪುರಸ್ಕಾರ ₹5 ಲಕ್ಷ ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದ್ದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್. ಶಂಕರ್ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ.* ಗುಜರಾತ್ನ ಸೂರತ್ನ ಹಿಮಾಂಶಿ ಶೆಲತ್ ಅವರು ಹೊಸತನದ ಬರವಣಿಗೆ ಶೈಲಿಯಿಂದ ಗುಜರಾತಿ ಹಾಗೂ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.* ಕಥೆ, ಕಾದಂಬರಿ, ಪ್ರಬಂಧ, ಸಾಹಿತ್ಯ ವಿಮರ್ಶೆ ಹಾಗೂ ಅನುವಾದ ಪ್ರಕಾರಗಳಲ್ಲಿ ಅವರ 20 ಪುಸ್ತಕಗಳು ಪ್ರಕಟವಾಗಿವೆ.* ಕೇಂದ್ರ ಸಾಹಿತ್ಯ ಅಕಾಡೆಮಿ (1996) ಬಹುಮಾನವೂ ಸೇರಿದಂತೆ ಹಲವಾರು ಪುರಸ್ಕಾರಗಳು ಕೂಡ ಅವರಿಗೆ ಲಭಿಸಿದೆ.* ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನಲ್ಲಿ 2025ರ ಜನವರಿ ತಿಂಗಳಲ್ಲಿ ನಡೆಸಲು ಸಮಿತಿಯು ತೀರ್ಮಾನಿಸಿದೆ.* ಹಿಮಾಂಶಿ ಅವರು 8.1.1947ರಂದು ಗುಜಾರತ್ನ ಸೂರತ್ನಲ್ಲಿ ಜನಿಸಿದರು. 1966ರಲ್ಲಿ ಬಿ.ಎ ಮತ್ತು 1968ರಲ್ಲಿ ಎಂ.ಎ ಪದವಿ ಪಡೆದಿದ್ದಾರೆ.* 1981-82ರಲ್ಲಿ ವಿ.ಎಸ್ ನೈಪಾಲ್ ಅವರ ಕಾದಂಬರಿಗಳ ಕುರಿತ ಅಧ್ಯಯನಕ್ಕಾಗಿ ಪಿಹೆಚ್ಡಿ ಪದವಿಯನ್ನೂ ಪಡೆದಿದ್ದಾರೆ. 1968 ರಿಂದ 1994ರಲ್ಲಿ ಅವರು ಸ್ವಯಂ ನಿವೃತ್ತಿ ಹೊಂದುವವರೆಗೂ ಸೂರತ್ನ ಎಂಟಿಬಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.