* ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಕಾಫಿ ರಫ್ತು ಶೇ.29 ರಷ್ಟು ಏರಿಕೆಯಾಗಿದೆ. FY24ರ ಏಪ್ರಿಲ್ ಮತ್ತು ನವೆಂಬರ್ ನಡುವೆ ದಾಖಲೆಯ $1.14 ಶತಕೋಟಿಯನ್ನು ಸಾಧಿಸಿದೆ.* ಇದು ಕಳೆದ ವರ್ಷದ ಇದೇ ಅವಧಿಯಲ್ಲಿ 803.8 ಮಿಲಿಯನ್ ಡಾಲರ್ ಕಾಫಿಯನ್ನು ರಾಪ್ತು ಮಾಡಲಾಗಿತ್ತು. ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ(CMIE) ಹೇಳಿದೆ.* ಜಾಗತಿಕ ಕಾಫಿ ಉತ್ಪಾದನೆಯಲ್ಲಿ ಶೇ.40ರಷ್ಟು ಪಾಲನ್ನು ಹೊಂದಿರುವ ಬ್ರೆಜಿಲ್ ನಲ್ಲಿ ಈ ವರ್ಷ ಪ್ರತಿಕೂಲ ಹವಾಮಾನದಿಂದ ಇಳುವರಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕಾಫಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ವಿಯೆಟ್ನಾಂನಲ್ಲೂ ಇಳುವರಿ ಕುಸಿದಿದೆ.* ಹೀಗಾಗಿ ಸಹಜವಾಗಿಯೇ ಭಾರತ ಕಾಫಿ ಪ್ರಿಯ ದೇಶಗಳ ಗಮನಸೆಳೆದಿದೆ. ಸಾಂಪ್ರದಾಯಿಕವಾಗಿ ಚಹಾ ರಫ್ತು ಮಾಡುವ ಭಾರತಕ್ಕೆ ಕಾಫಿ ಮಾರುಕಟ್ಟೆಯಲ್ಲೂ ಪ್ರಾಬಲ್ಯ ಸ್ಥಾಪಿಸುವ ಅವಕಾಶ ದೊರೆತಿದೆ.* ಇದೇ ಮೊದಲ ಬಾರಿಗೆ ಈ ಹಣಕಾಸು ವರ್ಷದ ನವೆಂಬರ್ನಲ್ಲಿ ಒಟ್ಟು ಕಾಫಿ ರಫ್ತು ಮೌಲ್ಯ ನೂರು ಕೋಟಿ ಡಾಲರ್ ದಾಟಿದೆ ಎಂದು ಸಿಎಂಐಇ ಹೇಳಿದೆ.* ಭಾರತದ ಉತ್ತಮ ಗುಣಮಟ್ಟದ ಕಾಫಿ, ಪ್ರಾಥಮಿಕವಾಗಿ ಕರ್ನಾಟಕದಿಂದ, ಪ್ರೀಮಿಯಂ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ಥಾಪಿತವಾಗಿದೆ, ಈ ಉಲ್ಬಣವನ್ನು ಮತ್ತಷ್ಟು ಹೆಚ್ಚಿಸಿದೆ.* ಐರೋಪ್ಯ ಒಕ್ಕೂಟದ ಕಾಫಿ ಪ್ರಿಯರಿಗೆ ಭಾರತದ ಕಾಫಿ ಅಚ್ಚುಮೆಚ್ಚು. ಒಟ್ಟು ರಫ್ರಿನಲ್ಲಿ ಇಟಲಿ, ಬೆಳ್ಳಿಯಂ ಮತ್ತು ಜರ್ಮನಿಯದು ಸಿಂಹಪಾಲು. ರಷ್ಯಾ, ಅಮೆರಿಕ ಮತ್ತು ಸಂಯುಕ್ತ ಅರಬ್ ಒಕ್ಕೂಟಕ್ಕೆ ಶೇ. 20ರಷ್ಟು ಕಾಫಿ ರಫ್ತಾಗಿದೆ,* ರಫ್ತು ಬೆಳವಣಿಗೆ- ಏಪ್ರಿಲ್-ನವೆಂಬರ್ FY24 ರಲ್ಲಿ $1.14 ಬಿಲಿಯನ್ ದಾಖಲೆ ರಫ್ತು, FY23 ($803.8 ಮಿಲಿಯನ್) ಗಿಂತ 29% ಹೆಚ್ಚಾಗಿದೆ.- 2023-24 ರಲ್ಲಿ ಒಟ್ಟು ರಫ್ತುಗಳು 12.22% ರಷ್ಟು ಏರಿಕೆಯಾಗಿ $1.28 ಶತಕೋಟಿಗೆ ತಲುಪಿದೆ.- ಪ್ರಮುಖ ರಫ್ತು ಮಾರುಕಟ್ಟೆಗಳು: ಇಟಲಿ, ರಷ್ಯಾ, ಯುಎಇ, ಜರ್ಮನಿ ಮತ್ತು ಟರ್ಕಿ.