* ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ದಿಡೀರ್ ನಿವೃತ್ತಿ ಘೋಷಿಸಿ ತಂಡಕ್ಕೆ ಶಾಕ್ ನೀಡಿದ್ದಾರೆ. ಈ ತಿಂಗಳ ಫೆಬ್ರುವರಿ.19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟವಾದ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೊಯಿನಿಸ್ ಸ್ಥಾನ ಪಡೆದಿದ್ದರು. * ಇದೀಗ ಅವರು ಏಕಾಏಕಿ ನಿವೃತ್ತಿ ಘೋಷಣೆ ಮಾಡಿದ್ದು, ಕ್ರೀಡಾಲೋಕದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಆಸೀಸ್ ಪರ ಟಿ20 ಆಡಲು ಲಭ್ಯವಿರುವುದಾಗಿ 35ವರ್ಷದ ಸ್ಟೋಯ್ನಿಸ್ ಹೇಳಿದ್ದಾರೆ. 71 ಏಕದಿನ ಪಂದ್ಯಗಳಲ್ಲಿ 26.69 ಸರಾಸರಿಯಲ್ಲಿ 1,495 ರನ್ ಅನ್ನು ಸ್ಟೋಯ್ನಿಸ್ ಗಳಿಸಿದ್ದಾರೆ.* ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಸ್ಟೊಯಿನಿಸ್ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ. ಹೀಗಾಗಿ ಮುಂಬರುವ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಬದಲಿ ಆಲ್ರೌಂಡರ್ನನ್ನು ಆಯ್ಕೆ ಮಾಡಬೇಕಾಗುತ್ತದೆ.* ಸ್ಟೋಯ್ನಿಸ್, ಗ್ಲೆನ್ ಮ್ಯಾಕ್ಸವೆಲ್, ಆರೋನ್ ಹಾರ್ಡಿ ಮತ್ತು ಮಿಚೆಲ್ ಮಾರ್ಶ್ ಅವರನ್ನು ಆಲ್ರೌಂಡರ್ ಎಂದು ಪರಿಗಣಿಸಿ 15 ಆಟಗಾರರ ಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆಯನ್ನು ಮಾಡಿತ್ತು.* 35 ವರ್ಷದ ಮಾರ್ಕಸ್ ಸ್ಟೊಯಿನಿಸ್ ಅವರು ಏಕದಿನ ಕ್ರಿಕೆಟ್ಗೆ ವಿದಾಯ ತಿಳಿಸಿ, ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಫ್ರಾಂಚೈಸಿ ಲೀಗ್ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.