* ತೀವ್ರ ಕುತೂಹಲ ಮೂಡಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 70ರಲ್ಲಿ 48 ಸ್ಥಾನ ಗೆದ್ದು ಭಾರೀ ಜಯ ಸಾಧಿಸಿದೆ. ಈ ಮೂಲಕ 22 ವರ್ಷಗಳ ನಂತರ ಸರ್ಕಾರ ರಚಿಸಲು ಸಜ್ಜಾಗಿದೆ. * ದಶಕದಿಂದ ದೆಹಲಿಯನ್ನು ಆಳಿದ್ದ ಆಮ್ ಆದ್ಮಿ ಪಕ್ಷ 22 ಸ್ಥಾನಗಳಿಂದ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.* ಆಮ್ ಆದ್ಮಪಕ್ಷದ ನಾಯಕ ಅರವಿಂದ್ ಕೇಜಿವಾಲ್ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲು ಕಂಡಿದ್ದರೆ ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಮಾಜಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ಬಹುಮತ ಗಳಿಸಿರುವ ಬಿಜೆಪಿಯಿಂದ ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ಹೆಚ್ಚಾಗಿದೆ.* ಫೆ. 5ರಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ 1.56 ಕೋಟಿ ಮತದಾರರಿಗಾಗಿ 13,766 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು ಮತದಾನ ಶೇ. 60.54 ದಾಖಲಾಗಿತ್ತು.* ಬಿಜೆಪಿ ಪಕ್ಷದ ಪರ್ವೇಶ್ ಸಾಹೀಬ್ ಸಿಂಗ್, ಮನೋಜ್ ಕುಮಾರ್ ಶೌಕೀನ್, ತರ್ವಿಂದರ್ ಸಿಂಗ್ ಮಾಲ್ವ ಮತ್ತು ಆಮ್ ಆದ್ಮಿ ಪಕ್ಷದ ಆತಿಶಿ , ಸಂಜೀವ್ ಝಾ ಮುಂತಾದವರು ಗೆಲುವು ಸಾಧಿಸಿದ್ದಾರೆ. * ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜಿವಾಲ್ ,ಮನೀಶ್ ಸಿಸೋಡಿಯಾ, ರಮೇಶ್ ಬಿಧುರಿ, ಬಿಜೆಪಿಯ ಸತ್ಯೇಂದ್ರ ಜೈನ್ ಸೋತಿದ್ದಾರೆ.