* ದೇಶದಲ್ಲಿ ಒಂಟೆ ಸಂತತಿ ತೀವ್ರವಾಗಿ ಕುಸಿಯುತ್ತಿದೆ. ಇವುಗಳನ್ನು ಸಾಂಪ್ರದಾಯಿಕವಾಗಿ ಸಾಕಣೆಯಲ್ಲಿ ತೊಡಗಿರುವ ಸಮುದಾಯಗಳ ಜೀವನೋಪಾಯಕ್ಕೆ ನೆರವು ನೀಡುವ ಅಗತ್ಯವಿದೆ' ಎಂದು ಪಶುಪಾಲನಾ ಮತ್ತು ಹೈನುಗಾರಿಕೆ ಇಲಾಖೆಯ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಹೇಳಿದ್ದಾರೆ.* 2024ನೇ ವರ್ಷವನ್ನು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಒಂಟೆಗಳ ವರ್ಷವೆಂದು ಘೋಷಿಸಿದೆ. ರಾಷ್ಟ್ರೀಯ ಜಾನುವಾರು ಮಿಷನ್ನಡಿ ಹುಲ್ಲುಗಾವಲುಗಳ ಸಂರಕ್ಷಣೆ ಮತ್ತು ಒಂಟೆ ಸಾಕಣೆದಾರರಿಗೆ ಪ್ರೋತ್ಸಾಹ ನೀಡಲು ಕ್ರಮವಹಿಸಲಾಗಿದೆ.* ದೇಶದಲ್ಲಿ ಹಸುವಿನ ಹಾಲು ಹೊರತಾಗಿ ಒಂಟೆ ಸೇರಿ ಇತರೆ ಪ್ರಾಣಿಗಳ ಹಾಲಿನ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಲಾಗಿದೆ. ದೇಶದಲ್ಲಿ ಒಂಟೆ ಹಾಲಿನ ವಲಯವನ್ನು ಸದೃಢಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.* ಒಂಟೆ ಹಾಲು ಅಧಿಕ ಪೋಷಕಾಂಶದಿಂದ ಕುಡಿದ್ದು ರೋಗಗಳನ್ನು ವಾಸಿ ಮಾಡುವ ಗುಣವಿದೆ* ಈ ಹಾಲಿನ ಸುಸ್ಥಿರ ಉತ್ಪಾದನೆಗೆ ಒತ್ತು ನೀಡುವ ಮೂಲಕ ಜನರ ಜೀವನಮಟ್ಟದ ಸುಧಾರಣೆಗೆ ಕ್ರಮವಹಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ಕೃಷಿ ಸಂಘಟನೆಯ ಪ್ರತಿನಿಧಿ ಟಕಾಯುಕಿ ಹಗಿವಾರ ತಿಳಿಸಿದ್ದಾರೆ.