* ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಡಿಸೆಂಬರ್ 25 ರಂದು ಉತ್ತಮ ಆಡಳಿತ ದಿನವನ್ನು ಆಚರಿಸಲಾಗುತ್ತದೆ .* 2014 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು, ಇದು ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತವನ್ನು ಒದಗಿಸುವ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪುವುದನ್ನು ಖಾತ್ರಿಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ.* ಡಿಸೆಂಬರ್ 25, 2024 ರಂದು ಉತ್ತಮ ಆಡಳಿತ ದಿನವು ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುವುದರಿಂದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ .* 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇವರು 23 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ,* ಇವರು 1996ರಲ್ಲಿ (13 ದಿನ) ಪ್ರಧಾನಿಯಾದ ಮೊದಲ ಬಿಜೆಪಿಯ ನಾಯಕ, ಅಂತರ 1998ರಲ್ಲಿ ಪ್ರಧಾನಿಯಾಗಿ ಆಯ್ಕೆ (NDA 13 ತಿಂಗಳು), ನಂತರ 1999 ರಿಂದ 2004 ರವರೆಗೆ ಪೂರ್ಣ ಪ್ರಮಾಣದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದಾರೆ, * ಇವರು 1947ರಲ್ಲಿ ದೀನ್ ದಯಾಳ್ ಉಪಾಧ್ಯಾಯರವರ ರಾಷ್ಟ್ರಧರ್ಮ, ಪಂಚ್ಯಾಜನ್ಯ, ವೀರ ಅರ್ಜುನ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿರುತ್ತಾರೆ, * ಇವರಿಗೆ 1994 ರಲ್ಲಿ ಪದ್ಮ ವಿಭೂಷಣ, 2015 ರಲ್ಲಿ ಭಾರತ ರತ್ನ ಪ್ರಶಸ್ತಿಗಳು ಸಂದಿವೆ, 11 ಮೇ 1998ರಲ್ಲಿ ಆಪರೇಷನ್ ಶಕ್ತಿ ಹೆಸರಿನ ಪರಮಾಣು ಪರೀಕ್ಷೆಯನ್ನು ರಾಜಸ್ಥಾನದ ಪೋಕ್ರಾನ್ ನಲ್ಲಿ ಯಶಸ್ವಿಗೊಳಿಸಿದರು.* ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಮುಖ ಪ್ರಶಸ್ತಿಗಳು- 1992: ಪದ್ಮವಿಭೂಷಣ, ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ- 1993: ಕಾನ್ಸುರ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ- 1994: ಲೋಕಮಾನ್ಯ ತಿಲಕ್ ಪ್ರಶಸ್ತಿ- 1994: ಅತ್ಯುತ್ತಮ ಸಂಸದೀಯ ಪ್ರಶಸ್ತಿ- 1994: ಭಾರತ ರತ್ನ ಪಂಡಿತ್ ಗೋವಿಂದ್ ವಲ್ಲಭ ಪಂತ್ ಪ್ರಶಸ್ತಿ- 2015: ಭಾರತ ರತ್ನ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ- 2015: ಬಾಂಗ್ಲಾದೇಶ ಮುಕ್ತಿಜುಧೋ ಸನ್ಮನೋನಾ (ಬಾಂಗ್ಲಾದೇಶ ವಿಮೋಚನಾ ಯುದ್ಧದ ಗೌರವ), ಬಾಂಗ್ಲಾದೇಶ ಸರಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಾಗಿವೆ.