* ಪ್ರತಿ ವರ್ಷ ಡಿಸೆಂಬರ್ 21 ರಂದು ಜೇಮ್ಸ್ ನೈಸ್ಮಿತ್ ಮ್ಯಾನಚೂನೆಟ್ಸ್ನ ಸ್ಪಿಂಗ್ಫೀಲ್ಡ್ನಲ್ಲಿ ಆಟವನ್ನು ಪರಿಚಯಿಸಿದ ದಿನವನ್ನು ವಿಶ್ವ ಬಾಸ್ಕೆಟ್ಬಾಲ್ ದಿನವನ್ನಾಗಿ ಆಚರಿಸಲಾಗುತ್ತದೆ.* ಜೇಮ್ಸ್ ನೈಸ್ಮಿತ್ ಅವರು ಡಿಸೆಂಬರ್ 21 1891 ರಂದು ಅಮೆರಿಕದ ಮ್ಯಾಸಚೂಸೆಟ್ಸ್ನ ಸ್ಪ್ರಿಂಗ್ಫೀಲ್ಡ್ನಲ್ಲಿರುವ ಇಂಟರ್ನ್ಯಾಶನಲ್ ವೈಎಂಸಿಎ ಟ್ರೈನಿಂಗ್ ಸ್ಕೂಲ್ನಲ್ಲಿ ಈ ಬಾಸ್ಕೆಟ್ಬಾಲ್ ಆಟವನ್ನು ಪರಿಚಯಿಸಿದರು. * 2023 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21 ಅನ್ನು "ವಿಶ್ವ ಬಾಸ್ಕೆಟ್ಬಾಲ್ ದಿನ" ಎಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.* ವಿಶ್ವ ಬಾಸ್ಕೆಟ್ಬಾಲ್ ದಿನ ಈ ಪರಿಕಲ್ಪನೆಯನ್ನು NYU ಪ್ರೊಪೆಸರ್ ಡೇವಿಡ್ ಹೊಲಾಂಡರ್ ಅವರು ತಮ್ಮ ಇತ್ತೀಚಿನ ಪುಸ್ತಕ' ಹೌ ಬಾಸ್ಕೆಟ್ಬಾಲ್ ಕ್ಯಾನ್ ಸೇವ್ ದಿ ವರ್ಲ್ಡ್' ನಲ್ಲಿ ಹುಟ್ಟುಹಾಕಿದ್ದಾರೆ.* ಬಾಸ್ಕೆಟ್ಬಾಲ್ ಇಷ್ಟಪಡುವ ಮತ್ತು ವ್ಯಾಪಕವಾಗಿ ಅಭ್ಯಾಸ ಮಾಡುವ ಕ್ರೀಡೆಗಳಲ್ಲಿ ಒಂದಾಗಿದೆ. FIBAದ ಅಂದಾಜು ಮಾಡಿರುವ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್ಬಾಲ್ ಆಟಗಾರರಿದ್ದಾರೆ.* ಕೆನಡಾದ ದೈಹಿಕ ಶಿಕ್ಷಣ ಬೋಧಕರಾದ ಡಾ. ಜೇಮ್ಸ್ ನೈಸ್ಮಿತ್ ಅವರು ವಿದ್ಯಾರ್ಥಿಗಳನ್ನು ಸಕ್ರಿಯವಾಗಿರಿಸಲು ಆಟವನ್ನು ಅಭಿವೃದ್ಧಿಪಡಿಸಿದ ನಂತರ, ಮ್ಯಾಸಚೂಸೆಟ್ಸ್ನ ಸ್ಪ್ರಿಂಗ್ಫೀಲ್ಡ್ನಲ್ಲಿರುವ ಇಂಟರ್ನ್ಯಾಷನಲ್ YMCA ತರಬೇತಿ ಶಾಲೆಯಲ್ಲಿ 1891 ರಲ್ಲಿ ಬ್ಯಾಸ್ಕೆಟ್ಬಾಲ್ ಅನ್ನು ಮೊದಲ ಬಾರಿಗೆ ಆಡಲಾಯಿತು.