* ಪ್ರತಿ ವರ್ಷ ಡಿಸೆಂಬರ್ 18ರಂದು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಉತ್ತೇಜಿಸಲು " ಅಲ್ಪಸಂಖ್ಯಾತರ ಹಕ್ಕುಗಳ ದಿನ " ವನ್ನು ಆಚರಿಸಲಾಗುತ್ತದೆ.* ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನವನ್ನು ಮೊದಲ ಬಾರಿಗೆ 2013 ರಲ್ಲಿ ಆಚರಿಸಲಾಯಿತು.* ವಿಶ್ವಸಂಸ್ಥೆಯು ಧಾರ್ಮಿಕ ಅಥವಾ ಭಾಷಾ ರಾಷ್ಟ್ರೀಯ ಅಥವಾ ಜನಾಂಗೀಯಕ್ಕೆ ಸೇರಿದ ವ್ಯಕ್ತಿಯ ಹಕ್ಕುಗಳ ಹೇಳಿಕೆಯನ್ನು ಡಿಸೆಂಬರ್ 18, 1992 ರಂದು ಅಂಗೀಕರಿಸಿತು.* ಈ ದಿನವನ್ನು ಆಚರಿಸುವ ಮುಖ್ಯ ಗುರಿ - ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸ್ವಾತಂತ್ರ್ಯ ಸಮಾನ ಅವಕಾಶವನ್ನು ಎತ್ತಿ ಹಿಡಿಯಲು.* ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1992 ರ ಸೆಕ್ಷನ್ 2 ( ಸಿ ) ಅಡಿಯಲ್ಲಿ - ಮುಸ್ಲಿಮರು, ಸಿಕ್ಕರು, ಕ್ರಿಶ್ಚಿಯನ್ನರು, ಬೌದ್ಧರು, ಜೈನ ಮತ್ತು ಪಾರ್ಸಿ ಜನಾಂಗದವರು ಅಲ್ಪಸಂಖ್ಯಾತ ಸಮುದಾಯಗಳೆಂದು ಸೂಚಿಸಿದೆ.* ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ದೆಹಲಿ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಮಣಿಪುರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳು ರಾಜ್ಯ ಅಲ್ಪಸಂಖ್ಯಾತರ ಆಯೋಗಗಳನ್ನು ಸ್ಥಾಪಿಸಿವೆ.