# ಭಾರತದಲ್ಲಿ ಚೀತಾಗಳ ಪುನರ್‌ಸ್ಥಾಪನೆಯ ಮಹತ್ವಾಕಾಂಕ್ಷಿ ಯೋಜನೆ ಮತ್ತೊಂದು ಹಂತವನ್ನು ಪ್ರವೇಶಿಸಲಿದೆ. ಆಫ್ರಿಕ ಖಂಡದ ಬೊಟ್ಸ್ವಾನಾ ದೇಶದಿಂದ 8 ಚೀತಾಗಳನ್ನು ಎರಡು ಹಂತಗಳಲ್ಲಿ ಭಾರತಕ್ಕೆ ತರಲಾಗುತ್ತಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (NTCA) ಅಧಿಕಾರಿಗಳು ತಿಳಿಸಿದ್ದಾರೆ.# ಈ ಮಾಹಿತಿ ಭೋಪಾಲ್‌ನಲ್ಲಿ ನಡೆದ "ಚೀತಾ ಯೋಜನೆ ಪರಿಶೀಲನಾ ಸಭೆ" ಯಲ್ಲಿ ಪ್ರಕಟವಾಯಿತು. ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಬೊಟ್ಸ್ವಾನಾದಿಂದ ಮೊದಲ ಹಂತದಲ್ಲಿ ನಾಲ್ಕು ಚೀತಾಗಳನ್ನು ಮೇ ತಿಂಗಳೊಳಗೆ ತರಲು, ಮತ್ತು ನಂತರದ ಹಂತದಲ್ಲಿ ಉಳಿದ ನಾಲ್ಕು ಚೀತಾಗಳನ್ನು ಭಾರತಕ್ಕೆ ತರಲು ಯೋಜನೆ ರೂಪಿಸಲಾಗಿದೆ.ಮೂಲಭೂತ ಯೋಜನೆ ಮತ್ತು ಬಂಡವಾಳ ಹೂಡಿಕೆ# ಈವರೆಗೆ ಚೀತಾ ಯೋಜನೆಗಾಗಿ ₹112 ಕೋಟಿ ಖರ್ಚಾಗಿದ್ದು, ಅದರಲ್ಲಿ ಶೇ.67 ರಷ್ಟು ಹಣವನ್ನು ಮಧ್ಯಪ್ರದೇಶದಲ್ಲಿ ಚೀತಾಗಳ ಪುನರ್ವಸತಿಗೆ ಬಳಸಲಾಗಿದೆ. ಚೀತಾಗಳ ಸಂರಕ್ಷಣೆಗೆ ಸರಿಯಾದ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.ಚೀತಾಗಳ ಸಾವು-ಬದುಕು# 2022 ರಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಮತ್ತು 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕರೆತರಲಾಗಿತ್ತು. ಪ್ರಸ್ತುತ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಒಟ್ಟು 26 ಚೀತಾಗಳಿದ್ದು, ಅವುಗಳಲ್ಲಿ 14 ಚಿರತೆಗಳು ಭಾರತದಲ್ಲಿಯೇ ಜನಿಸಿವೆ. ಪ್ರಮುಖವಾಗಿ ಜ್ವಾಲಾ, ಆಶಾ, ಗಾಮಿನಿ ಮತ್ತು ವೀರಾ ಎಂಬ ಚೀತಾಗಳು ಮರಿಗಳಿಗೆ ಜನ್ಮ ನೀಡಿರುವುದು ಯೋಜನೆಯ ಯಶಸ್ಸಿಗೆ ಸಂಕೇತವಾಗಿದೆ.ಪ್ರವಾಸೋದ್ಯಮಕ್ಕೂ ಉತ್ತೇಜನೆ# ಇದರಿಂದಾಗಿ ಕುನೋ ಉದ್ಯಾನವನದ ಪ್ರವಾಸಿಗರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ದ್ವಿಗುಣವಾಗಿದೆ. ಇದು ಸ್ಥಳೀಯ ಆರ್ಥಿಕತೆಯ ಮೇಲೆಯೂ ಸಾಕಷ್ಟು ಪ್ರಭಾವ ಬೀರಲಿದೆ.ಭವಿಷ್ಯದ ಪ್ರಗತಿ# ಇನ್ನೂ ಹೆಚ್ಚು ಚೀತಾಗಳನ್ನು ಭಾರತಕ್ಕೆ ತರಲು ಬೊಟ್ಸ್ವಾನಾ, ದಕ್ಷಿಣ ಆಫ್ರಿಕಾ ಹಾಗೂ ಕೀನ್ಯಾ ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದ್ದು, ತ್ವರಿತ ಒಪ್ಪಂದಗಳ ಮೂಲಕ ಮುಂದಿನ ಹಂತಗಳಲ್ಲಿ ಚೀತಾಗಳನ್ನ ಕರೆತರಲು ಸರ್ಕಾರ ತೀರ್ಮಾನಿಸಿದೆ.# ಈ ಎಲ್ಲಾ ಕ್ರಮಗಳು ಭಾರತದಲ್ಲಿ ನೈಸರ್ಗಿಕ ಜೈವಿಕ ವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸಲು ಮಹತ್ವಪೂರ್ಣ ಹೆಜ್ಜೆಯಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಹೊಸ ಅಧ್ಯಾಯವನ್ನಾರಂಭಿಸುವಂತೆ ಕಾಣುತ್ತಿದೆ.