* ಚೀನಾ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ವಿದೇಶಾಂಗ ಸಚಿವರು ಬೀಜಿಂಗ್‌ನಲ್ಲಿ ಭೇಟಿ ನೀಡಿ ಮೂರು ರಾಷ್ಟ್ರಗಳ ನಡುವಿನ ಸಹಕಾರವನ್ನು ವೃದ್ಧಿಸುವ ಕುರಿತು ಚರ್ಚೆ ನಡೆಸಿದರು.
* ಈ ಸಭೆಯಲ್ಲಿ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಅನ್ನು ಅಫ್ಗಾನಿಸ್ತಾನವರೆಗೆ ವಿಸ್ತರಿಸಲು ಒಮ್ಮತಕ್ಕೆ ಬಂತು.
* ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಪಾಕಿಸ್ತಾನದ ಇಶಾಕ್ ಡಾರ್ ಹಾಗೂ ಅಫ್ಗಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನಡುವೆ ನಡೆದ ಈ ಮಾತುಕತೆಯ ಕುರಿತು ಪಾಕಿಸ್ತಾನ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
* ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಸಾರ್ವಭೌಮತೆ, ಭದ್ರತೆ ಹಾಗೂ ರಾಷ್ಟ್ರ ಘನತೆಗೆ ಬೆಂಬಲ ನೀಡುವುದಾಗಿ ವಾಂಗ್ ಯಿ ಹೇಳಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
* ಸಿಪಿಇಸಿ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಸಾಗುವುದರಿಂದ ಭಾರತವು ಇದಕ್ಕೆ ಕಠಿಣ ವಿರೋಧ ವ್ಯಕ್ತಪಡಿಸಿದೆ.
ಶುಕ್ರವಾರ, 23 ಮೇ 2025
12:52 ಅಪರಾಹ್ನ
Daily PDF
ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಫ್ಗಾನಿಸ್ತಾನವರೆಗೆ ವಿಸ್ತರಣೆ
Authored by:
Jyoti Angadi