* ಭಾರತದ ಯಾವುದೇ ನಗರ ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ ವಾಯು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು 'ಹೆಲ್ತ್ ಜರ್ನಲ್ ಲ್ಯಾನ್ಸೆಟ್' ಅಧ್ಯಯನ ವರದಿ ತಿಳಿಸಿದೆ.* WHO ಗುರುತಿಸಿರುವ ಪಿಎಂ 2.5 ಹಂತದ ವಾಯುಮಾಲಿನ್ಯವು ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ, ಹೃದಯಾಘಾತ ಮತ್ತು ಪಾರ್ಶ್ವವಾಯು, ರಕ್ತದೊತ್ತಡದ ಏರಿಳಿಕೆಗಳಂಥ ಅಪಾಯವನ್ನೂ ಹೆಚ್ಚಿಸುತ್ತದೆ. ಮಕ್ಕಳ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ.* ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದ ವಾರ್ಷಿಕ ಸರಾಸರಿ ವಾಯುಮಾಲಿನ್ಯ ಮಟ್ಟಕ್ಕಿಂತ ಕಡಿಮೆ ಮಾಲಿನ್ಯ ಇರುವ ಪ್ರದೇಶಗಳಲ್ಲಿ ಭಾರತದಲ್ಲಿ ಯಾರೊಬ್ಬರೂ ವಾಸಿಸುತ್ತಿಲ್ಲ.* ಪಿಎಂ 2.5ಕ್ಕೂ ಹೆಚ್ಚಿನ ವಾಯುಮಾಲಿನ್ಯದ ಪರಿಣಾಮ ದೇಶದಲ್ಲಿ ವರ್ಷಕ್ಕೆ 1.5 ಮಿಲಿಯನ್ ಮಂದಿ ಮೃತಪಡುತ್ತಿದ್ದಾರೆ ಎಂದು ಲ್ಯಾನ್ಸೆಟ್ ಪ್ಲಾನೆಟ್ ಹೆಲ್ತ್ ತಿಳಿಸಿದೆ.* ವರದಿ ಪ್ರಕಾರ, ಕನಿಷ್ಠ ವಾಯು ಗುಣಮಟ್ಟದ ಮಾನದಂಡಕ್ಕಿಂತ ಕಡಿಮೆ ಗುಣಮಟ್ಟವಿರುವ ಸ್ಥಳಗಳಲ್ಲಿ ದೇಶದ ಜನಸಂಖ್ಯೆಯ ಶೇ.81.9ರಷ್ಟು ಭಾರತೀಯರು ವಾಸಿಸುತ್ತಿದ್ದಾರೆ.* ದೇಶದ ವಾಯು ಗುಣಮಟ್ಟ ಮಾನದಂಡವು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ್ದಕ್ಕಿಂತ ಕಡಿಮೆ ಇದೆ. ದೀರ್ಘಾವಧಿವರೆಗೆ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರ ಪರಿಣಾಮದಿಂದ 0.3 ಮಿಲಿಯನ್ ಸಾವು ಸಂಭವಿಸುತ್ತವೆ.