* ಭಾರತೀಯ ರೈಲ್ವೇಯು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಭಾರತದ ಮೊದಲ ಕೇಬಲ್ ಸ್ಟೇಡ್ ರೈಲು ಸೇತುವೆಯಾದ ಅಂಜಿ ಖಾಡ್ ಸೇತುವೆಯ (Anji Khad Bridge) ಮೇಲೆ ಟವರ್ ವ್ಯಾಗನ್ನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ನಡೆಸಿದೆ.* ಪ್ರಾಯೋಗಿಕ ಚಾಲನೆಯು ಜನವರಿ 2025ರಲ್ಲಿ ಕಾಶ್ಮೀರಕ್ಕೆ ನಿರೀಕ್ಷಿತ ರೈಲು ಸೇವೆಗಳನ್ನು ಪ್ರಾರಂಭಿಸಲು ದಾರಿ ಮಾಡಿಕೊಡುತ್ತದೆ.* ಅಂಜಿ ಖಾಡ್ ಸೇತುವೆಯು ವಿಶ್ವಪ್ರಸಿದ್ಧ ಚೆನಾಬ್ ರೈಲು ಸೇತುವೆಯ ನಂತರ ಭಾರತದಲ್ಲಿ ಎರಡನೇ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ ಇದು ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿದೆ ಮತ್ತು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ.* ಬಹಳ ವರ್ಷಗಳ ವಿಳಂಬದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಮೊದಲ ಕೇಬಲ್ ಸ್ಟೆಡ್ ರೈಲು ಸೇತುವೆಯು ಪೂರ್ಣಗೊಳ್ಳುತ್ತಿದೆ.* ಕಾಶ್ಮೀರ ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಗುರಿ ಹೊಂದಿರುವ ಉಧಮ್ಪುರ-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (ಯುಎಸ್ಬಿಆರ್ಎಲ್) ಯೋಜನೆಯಲ್ಲಿ ಈ ಸಾಧನೆಯು ಮಹತ್ವದ ಮೈಲುಗಲ್ಲಾಗಿದೆ.* ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಯಶಸ್ವಿ ಪ್ರಯೋಗದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.