* 10 ವರ್ಷಗಳ ಹಿಂದೆ ಸುಮಾರು 2,000 ಕೋಟಿ ರೂ. ಗಳಷ್ಟಿದ್ದ ನಮ್ಮ ರಕ್ಷಣಾ ರಫ್ತು ಈಗ ದಾಖಲೆಯ 21,000 ಕೋಟಿ ರೂ. ಗಳನ್ನು ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.* ಎರಡು ಶತಮಾನಗಳಿಗೂ ಹೆಚ್ಚು ಹಳೆಯದಾದ ಮೌ ಕಂಟೋನ್ಮೆಂಟ್ನಲ್ಲಿರುವ ಆರ್ಮಿ ವಾರ್ ಕಾಲೇಜ್ (ಎಡಬ್ಲ್ಯೂಸಿ) ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್ 2029ರ ವೇಳೆಗೆ ನಾವು 50,000 ಕೋಟಿ ರೂ. ಮೊತ್ತದ ರಫ್ತನ್ನು ಸಾಧಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.* ಭವಿಷ್ಯದ ಸವಾಲುಗಳನ್ನು ಎದುರಿಸಲು ಸೈನಿಕರನ್ನು ಸಜ್ಜುಗೊಳಿಸುವಲ್ಲಿ ಸೇನಾ ತರಬೇತಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ. ಭಾರತದಲ್ಲಿ ತಯಾರಾಗುತ್ತಿರುವ ಉಪಕರಣಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.* ಬದಲಾಗುತ್ತಿರುವ ಯುದ್ಧದ ಸ್ವರೂಪಗಳ ಕುರಿತು ಪ್ರತಿಕ್ರಿಯಿಸಿರುವ ಸಿಂಗ್ ಕೃತಕ ಬುದ್ಧಿಮತ್ತೆ ಆಧರಿತ ಯುದ್ಧ, ಪರೋಕ್ಷ ಯುದ್ಧ ಹಾಗೂ ಸೈಬರ್ ದಾಳಿಗಳು ಸೇರಿದಂತೆ ಅನೇಕ ಅಸಾಂಪ್ರದಾಯಿಕ ವಿಧಾನಗಳು ದೊಡ್ಡ ಸವಾಲುಗಳನ್ನು ಒಡ್ಡುತ್ತಿವೆ ಎಂದು ತಿಳಿಸಿದ್ದಾರೆ.* ಮೂರು ಸೇವೆಗಳ ನಡುವೆ ಏಕೀಕರಣ ಮತ್ತು ಜಂಟಿಯನ್ನು ಬಲಪಡಿಸಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು. "ಮುಂಬರುವ ದಿನಗಳಲ್ಲಿ, ಸಶಸ್ತ್ರ ಪಡೆಗಳು ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ" ಎಂದು ಸಿಂಗ್ ತಿಳಿದರು.