* ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹಾಗೂ ಅನುಭವಿ ಆರಂಭ ಆಟಗಾರ್ತಿ ಸ್ಮೃತಿ ಮಂದಾನಾ ಅವರು ಐರ್ಲೆಂಡ್ ವಿರುದ್ಧ ಶತಕ ದಾಖಲಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ ವೇಗದ ಶತಕದ ಹೊಸ ದಾಖಲೆ ಬರೆದರು.* ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ 2025 ಜನವರಿ 15 ರಂದು ನಡೆದ ಐರ್ಲೆಂಡ್ ಮಹಿಳಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹಲವು ದಾಖಲೆಗಳನ್ನು ಮುರಿದಿದ್ದಾರೆ. * ಹಿಂದೆ ಭಾರತದಲ್ಲಿ ವೇಗದ ಶತಕ ದಾಖಲಿಸಿದ ಕೀರ್ತಿ ಹರ್ಮನ್ಪ್ರೀತ್ ಕೌರ್ ಅವರ ಹೆಸರಿನಲ್ಲಿತ್ತು. ಮಂದಾನ ಈ ದಾಖಲೆಯನ್ನು ಮುರಿದರು. ಏಕದಿನ ಪಂದ್ಯಗಳಲ್ಲಿ ಮಂದಾನ 10 ಶತಕಗಳನ್ನು ಸಿಡಿಸಿದ್ದಾರೆ.* ಹರ್ಮನ್ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಮಂಧಾನ ಅವರು ಮಹಿಳಾ ODIಗಳಲ್ಲಿ ಭಾರತೀಯ ಆಟಗಾರ್ತಿಯ ಅತಿ ವೇಗದ ಶತಕವನ್ನು ಗಳಿಸಿ ಪ್ರಾಬಲ್ಯವನ್ನು ಪ್ರದರ್ಶಿಸಿದರು. * ಹರ್ಮನ್ ಪ್ರೀತ್ ಕೌರ್ ಅವರ ದಕ್ಷಿಣ ಆಫ್ರಿಕಾ ವಿರುದ್ದ 87 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆಯಾಗಿತ್ತು. ಮಂದಾನಾ ಅವರು 70 ಎಸೆತಗಳಲ್ಲಿ ಶತಕ ಸಿಡಿಸಿ ಕೌರ್ ದಾಖಲೆ ಮುರಿದರು.* ಮಹಿಳಾ ಏಕದಿನ ಪಂದ್ಯಗಳಲ್ಲಿ 15 ಶತಕಗಳನ್ನು ಸಿಡಿಸಿರುವ ಆಸ್ಟ್ರೇಲಿಯಾದ ಮೇಗ್ ಲ್ಯಾನಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಯೂಜಿಲ್ಯಾಂಡ್ ನ ಬೇಟ್ಸ್ 13 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಟ್ಯಾಮಿ ಹಾಗೂ ಭಾರತದ ಮಂದಾನಾ ತಲಾ 10 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.- ಭಾರತ ಮಹಿಳೆಯರ ವೇಗವಾದ ಶತಕಗಳು* ಸ್ಮೃತಿ ಮಂಧಾನಾ: 70 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)* ಹರ್ಮನ್ಪ್ರೀತ್ ಕೌರ್: 87 ಎಸೆತಗಳಲ್ಲಿ ಶತಕ (ದಕ್ಷಿಣ ಆಫ್ರಿಕಾ ವಿರುದ್ಧ)* ಹರ್ಮನ್ಪ್ರೀತ್ ಕೌರ್: 90 ಎಸೆತಗಳಲ್ಲಿ ಶತಕ (ಆಸ್ಟ್ರೇಲಿಯಾ ವಿರುದ್ಧ)* ಜೆಮಿಮಾ ರೋಡ್ರಿಗ್ಸ್: 90 ಎಸೆತಗಳಲ್ಲಿ ಶತಕ (ಐರ್ಲೆಂಡ್ ವಿರುದ್ಧ)* ಹಾ.ಡಿಯೋಲ್: 98 ಎಸೆತಗಳಲ್ಲಿ ಶತಕ (ವಿಂಡೀಸ್ ವಿರುದ್ಧ)