* ಅಮೆರಿಕದ ಮ್ಯಾಡಿಸನ್ ಕೀಸ್ ಅವರು [Madison Keys] ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.* ಶನಿವಾರ (ಜ.25) ನಡೆದ ಪಂದ್ಯದಲ್ಲಿ 29 ವರ್ಷದ ಮ್ಯಾಡಿಸನ್ ಅವರು ಅಗ್ರ ಶ್ರೇಯಾಂಕಿತೆ ಬೆಲರೂಸ್ನ ಅರಿನಾ ಸಬಲೆಂಕಾ ವಿರುದ್ಧ 6-3, 2-6, 7-5ರ ಅಂತರದಲ್ಲಿ ರೋಚಕ ಜಯ ಸಾಧಿಸಿದ್ದಾರೆ.* ಇದರೊಂದಿಗೆ 26 ವರ್ಷದ ಸಬಲೆಂಕಾ ಅವರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಹ್ಯಾಟ್ರಿಕ್ ಕನಸು ಭಗ್ನಗೊಂಡಿದೆ. 2023 ಹಾಗೂ 2024ನೇ ಸಾಲಿನಲ್ಲಿ ಸಬಲೆಂಕಾ ಚಾಂಪಿಯನ್ ಎನಿಸಿಕೊಂಡಿದ್ದರು.* ಕಳೆದ ವರ್ಷ ಅಮೆರಿಕನ್ ಓಪನ್ ಪ್ರಶಸ್ತಿ ಗೆದ್ದ ಆಟಗಾರ್ತಿ ಮ್ಯಾಡಿಸನ್ 19ನೇ ಶ್ರೇಯಾಂಕದಲ್ಲಿ ತನ್ನ ಮೊದಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.* ಮ್ಯಾಡಿಸನ್ ಮೊದಲ ಸೆಟ್ 6-3ರಲ್ಲಿ ಗೆದ್ದು ಮುನ್ನಡೆ ಸಾಧಿಸಿದರು, ಆದರೆ ಸಬಲೆಂಕಾ ಎರಡನೇ ಸೆಟ್ 6-2ರಲ್ಲಿ ಗೆದ್ದು ಸಮಬಲಕ್ಕೆ ತಂದರು.* ಮೂರನೇ ಸೆಟ್ನಲ್ಲಿ ಸಮಬಲದ ಹೋರಾಟ ನಡೆದರೂ, ಕೊನೆಯ ಕ್ಷಣದಲ್ಲಿ ಒತ್ತಡ ನಿಭಾಯಿಸಿದ ಮ್ಯಾಡಿಸನ್ ಚಾಂಪಿಯನ್ ಆಗಿದ್ದಾರೆ.