* ಕಳೆದ ಐದು ವರ್ಷಗಳಲ್ಲಿ ಅಂದರೆ 2018ರಿಂದ 2022ರ ಅವಧಿಯಲ್ಲಿ ಭಾರತ ದೇಶದಲ್ಲಿ ಬರೊಬ್ಬರಿ 7.77 ಲಕ್ಷ ರಸ್ತೆ ಅಪಘಾತ ಸಾವುಗಳು ಸಂಭವಿಸಿದ್ದು, ಅತೀ ಹೆಚ್ಚು ಅತಿ ಹೆಚ್ಚು ರಸ್ತೆ ಅಪಘಾತ ಸಾವು ಸಂಭವಿಸಿದ (Accident Deaths) ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದೆ. * ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿದ ರಾಜ್ಯಗಳ ಪಟ್ಟಿಯ ಪೈಕಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ಅತಿ ಹೆಚ್ಚು ರಸ್ತೆ ಅಪಘಾತಗಳಿಗೆ ಸಾಕ್ಷಿಯಾಗಿವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.* ಈ ಪಟ್ಟಿಯಲ್ಲಿ ಮಧ್ಯಪ್ರದೇಶ 4 ಮತ್ತು ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಮಧ್ಯಪ್ರದೇಶದಲ್ಲಿ 58,580 ರಸ್ತೆ ಅಪಘಾತ ಸಂಭವಿಸಿದ್ದು, ಕರ್ನಾಟಕದಲ್ಲಿ 53,448 ರಸ್ತೆ ಅಪಘಾತ ಸಾವುಗಳು ವರದಿಯಾಗಿವೆ.* ದೇಶದಲ್ಲಿ ಒಟ್ಟು ರಸ್ತೆ ಅಪಘಾತ ಸಾವುಗಳ ಸಂಖ್ಯೆ 2022 ರಲ್ಲಿ 1,68,491 ಕ್ಕೆ ತಲುಪಿದ್ದು, ಇದು 2021 ರಲ್ಲಿ 1,53,972ರಷ್ಟಿತ್ತು ಎಂದು ಇತ್ತೀಚೆಗೆ ಬಿಡುಗಡೆಯಾದ 'ಭಾರತದಲ್ಲಿ ರಸ್ತೆ ಅಪಘಾತಗಳು, 2022' (Road Accidents in India, 2022)ವರದಿ ಹೇಳಿದೆ.* 2022 ರಲ್ಲಿ ಮಾತ್ರವೇ 22,595 ರಸ್ತೆ ಅಪಘಾತ ಸಾವುಗಳೊಂದಿಗೆ ಉತ್ತರ ಪ್ರದೇಶವು ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ದಾಖಲಿಸಿದ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಂತೆಯೇ 2022 ರಲ್ಲಿ ಮಹಾರಾಷ್ಟ್ರವು 15,224 ರಸ್ತೆ ಅಪಘಾತ ಸಾವುಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಅದೇ ವರ್ಷ ತಮಿಳುನಾಡು 17,884 ರಸ್ತೆ ಅಪಘಾತ ಸಾವುಗಳನ್ನು ವರದಿ ಮಾಡಿದೆ. ಭಾರತದ ಒಟ್ಟು ರಸ್ತೆ ಅಪಘಾತ ಸಾವುಗಳ ಪೈಕಿ ಈ 3 ರಾಜ್ಯಗಳೇ ಗಮನಾರ್ಹ ಪಾಲನ್ನು ಹೊಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.* ಹೆಚ್ಚಿನ ರಸ್ತೆ ಅಪಘಾತ ಸಾವುಗಳು ಅತಿ ವೇಗ, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ಕುಡಿದು ವಾಹನ ಚಲಾಯಿಸುವುದು ಮತ್ತು ಚಾಲಕರ ಅಶಿಸ್ತಿನಿಂದ ಉಂಟಾಗಿದೆ ಎಂದು ವರದಿ ತಿಳಿಸಿದೆ.* ಅಪಘಾತಗಳನ್ನು ಶೇಕಡಾ 50 ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದರೂ, ಭಾರತದಲ್ಲಿ ರಸ್ತೆ ಅಪಘಾತಗಳು ವಾಸ್ತವವಾಗಿ ಹೆಚ್ಚಿವೆ ಎಂದು ಅವರು ಒಪ್ಪಿಕೊಂಡರು. ಮಾನವ ನಡವಳಿಕೆ ಮತ್ತು ಸಾಮಾಜಿಕ ಮಾನದಂಡಗಳಲ್ಲಿ ಬದಲಾವಣೆಯ ಅವಶ್ಯಕತೆಯಿದೆ ಎಂದೂ ಗಡ್ಕರಿ ಅಭಿಪ್ರಾಯಪಟ್ಟರು. ಅಂತೆಯೇ ರಸ್ತೆ ಸುರಕ್ಷತೆಯನ್ನು ಸುಧಾರಿಸಲು ನಾವು ಕಾನೂನಿನ ನಿಯಮದ ಬಗ್ಗೆ ಗೌರವವನ್ನೂ ಬೆಳೆಸಿಕೊಳ್ಳಬೇಕು ಎಂದು ಗಡ್ಕರಿ ಅವರು ಹೇಳಿದರು.* ಐದು ವರ್ಷಗಳಲ್ಲಿ (2018-2022) ಅತಿ ಹೆಚ್ಚು ಅಪಘಾತ ಸಾವು ಸಂಭವಿಸಿದ ಟಾಪ್ 10 ರಾಜ್ಯಗಳ ಪಟ್ಟಿ : 1. ಉತ್ತರ ಪ್ರದೇಶ - 1,08,882 ಸಾವುಗಳು2. ಮಿಳುನಾಡು - 84,316 ಸಾವುಗಳು3. ಮಹಾರಾಷ್ಟ್ರ - 66,370 ಸಾವುಗಳು4. ಮಧ್ಯಪ್ರದೇಶ - 58,580 ಸಾವುಗಳು5. ಕರ್ನಾಟಕ - 53,448 ಸಾವುಗಳು6. ರಾಜಸ್ಥಾನ - 51,280 ಸಾವುಗಳು7. ಆಂಧ್ರಪ್ರದೇಶ - 39,058 ಸಾವುಗಳು8. ಬಿಹಾರ - 36,191 ಸಾವುಗಳು9. ತೆಲಂಗಾಣ - 35,565 ಸಾವುಗಳು10. ಗುಜರಾತ್ - 36,626 ಸಾವುಗಳು