* ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್, ಸ್ಫೋಟಕ ಆಟಗಾರ, ಮಾರ್ಟಿನ್ ಗಪ್ಟಿಲ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಜನವರಿ 8 ರಂದು (ಬುಧವಾರ) ನಿವೃತ್ತಿ ಘೋಷಿಸಿದ್ದಾರೆ. * ಮಾರ್ಚ್ 2022 ರಲ್ಲಿ ನ್ಯೂಜಿಲೆಂಡ್ ಪರ ಕೊನೆಯ ಬಾರಿಗೆ ಆಡಿದ್ದ ಮಾರ್ಟಿನ್ ಗುಪ್ಟಿಲ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. 38ರ ಹರೆಯದ ಗುಪ್ಟಿಲ್ ಅವರು ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.* 2009ರ ಜನವರಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಮೂಲಕ ಅವರು ತಂಡಕ್ಕೆ ಪದಾರ್ಪಣೆ‌ ಮಾಡಿದ್ದರು. ಈಡನ್‌ ಪಾರ್ಕ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಗಪ್ಟಿಲ್‌ ಅವರು ಶತಕವನ್ನು ಸಿಡಿಸಿದ್ದರು. * ಗಪ್ಟಿಲ್‌ ಅವರು ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಕಿವೀಸ್‌ ಆಟಗಾರನಾಗಿ ಗಪ್ಟಿಲ್‌ ಹೊರಹೊಮ್ಮಿದ್ದರು. ಆ ಬಳಿಕ ಫೆಬ್ರವರಿ ತಿಂಗಳಿನಲ್ಲಿ ಅವರು ಟಿ-20 ತಂಡದಲ್ಲೂ ಸ್ಥಾನ ಪಡೆದಿದ್ದರು. ಟಿ20 ಲೀಗ್ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.* ಗುಪ್ಟಿಲ್ ಅವರು 2009 ರಿಂದ 2016 ರವರೆಗೆ 47 ಟೆಸ್ಟ್ ಪಂದ್ಯಗಳನ್ನು ಆಡಿದರು, ಆದರೂ ಅವರು ಸುದೀರ್ಘ ಸ್ವರೂಪದಲ್ಲಿ 29.38 ಕ್ಕೆ 2586 ರನ್ ಗಳಿಸಿದರು.* ಗಪ್ಟಿಲ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 7,346 ರನ್ ಗಳಿಸಿದ್ದು, ನ್ಯೂಝಿಲ್ಯಾಂಡ್‌ ನ ಸಾರ್ವಕಾಲಿಕ ರನ್ ಸ್ಕೋರರ್‌ ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.