➤ ಒಟ್ಟು ಜನನ ಪ್ರಮಾಣ (TFR) ಮತ್ತು ರೀಪ್ಲೇಸ್‌ಮೆಂಟ್ ಮಟ್ಟ:ಯಾವುದೇ ಒಂದು ದೇಶ ಅಥವಾ ಪ್ರದೇಶದ ಜನಸಂಖ್ಯೆಯು ಮುಂದಿನ ಪೀಳಿಗೆಯಲ್ಲೂ ಸ್ಥಿರವಾಗಿ (ಸ್ಥಿರ ಜನಸಂಖ್ಯೆ) ಮುಂದುವರಿಯಬೇಕಾದರೆ ಅಲ್ಲಿನ ಕನಿಷ್ಠ ಜನನ ಪ್ರಮಾಣ 2.1 ಇರಬೇಕು. ಇದನ್ನು ಜನಸಂಖ್ಯಾ ಶಾಸ್ತ್ರದಲ್ಲಿ 'ರೀಪ್ಲೇಸ್‌ಮೆಂಟ್ ಮಟ್ಟ' (Replacement Level) ಎನ್ನಲಾಗುತ್ತದೆ. ಅಂದರೆ, ಸರಾಸರಿ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಕನಿಷ್ಠ ಇಬ್ಬರು ಮಕ್ಕಳಿಗೆ ಜನ್ಮ ನೀಡಬೇಕಾಗುತ್ತದೆ. ಆದರೆ ಪ್ರಸ್ತುತ ಅಂಡಮಾನ್‌ನ ದರವು (0.9) ಈ ಕನಿಷ್ಠ ಪ್ರಮಾಣದ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಇದು ಮುಂಬರುವ ದಿನಗಳಲ್ಲಿ ಇಲ್ಲಿನ ಜನಸಂಖ್ಯೆಯಲ್ಲಿ ಭಾರಿ ಇಳಿತ ಉಂಟಾಗುವುದರ ಸ್ಪಷ್ಟ ಮುನ್ಸೂಚನೆಯಾಗಿದೆ.
➤ ಜನಸಂಖ್ಯಾ ಬದಲಾವಣೆಯ ಪ್ರಮುಖ ಅಂಕಿ-ಅಂಶಗಳು (NFHS-5 vs NFHS-6):
- ಒಟ್ಟು ಜನನ ಪ್ರಮಾಣ (TFR): 1.30.95
- ವರ್ಷದೊಳಗಿನ ಮಕ್ಕಳ ಜನಸಂಖ್ಯೆ: 5.3%3.7%60
- ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು: 11%12.6%
- 2 ರಿಂದ 4 ವರ್ಷದ ಮಕ್ಕಳ ಪ್ರಿ-ಸ್ಕೂಲ್ ದಾಖಲಾತಿ: 88.5%66.2%
➤ ಜನನ ಪ್ರಮಾಣ ಭಾರಿ ಕುಸಿತಕ್ಕೆ ಪ್ರಮುಖ ಕಾರಣಗಳು:
- ಮಹಿಳಾ ಸಾಕ್ಷರತೆ ಮತ್ತು ಆರ್ಥಿಕ ಸ್ವಾವಲಂಬನೆ: ದ್ವೀಪದಲ್ಲಿ ಮಹಿಳಾ ಸಾಕ್ಷರತೆ ಗಣನೀಯವಾಗಿ ಹೆಚ್ಚಾಗಿದ್ದು, ಬಹುತೇಕ ಮಹಿಳೆಯರು ಉನ್ನತ ಶಿಕ್ಷಣ ಹಾಗೂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.
- ಕಡಿಮೆ ನಿರುದ್ಯೋಗ ದರ: ಇದೊಂದು ಮಧ್ಯಮ ವರ್ಗದ ಸಮಾಜವಾಗಿದ್ದು, ನಿರುದ್ಯೋಗ ದರ ತೀರಾ ಕಡಿಮೆಯಿದೆ. ಇದು ಜೀವನಮಟ್ಟದ ಸುಧಾರಣೆಗೆ ಕಾರಣವಾಗಿದೆ.
- ಆಧುನಿಕ ಕುಟುಂಬ ಯೋಜನೆ: ಆಧುನಿಕ ಕುಟುಂಬ ಯೋಜನಾ ಪದ್ಧತಿಗಳು ಮತ್ತು ಗರ್ಭನಿರೋಧಕಗಳು ಸುಲಭವಾಗಿ ಲಭ್ಯವಿರುವುದು ಜನನ ಪ್ರಮಾಣ ನಿಯಂತ್ರಣಕ್ಕೆ ನೆರವಾಗಿದೆ.
- ಒಂದೇ ಮಗುವಿನ ನೀತಿ (Single Child Preference): ಇಂದಿನ ಯುವ ದಂಪತಿಗಳು ಆರ್ಥಿಕ ಹೊರೆ ಹಾಗೂ ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಕೇವಲ ಒಂದೇ ಮಗುವನ್ನು ಹೊಂದಲು ಬಯಸುತ್ತಿದ್ದಾರೆ.
KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ