* ಆಸ್ಟ್ರೇಲಿಯನ್ ಓಪನ್ನ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್-1 ಟೆನಿಸ್ ತಾರೆ ಜಾನಿಕ್ ಸಿನ್ನರ್ ಮೂರನೇ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾರೆ. * ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಜಾನಿಕ್ ಸಿನ್ನರ್ 6-3, 7-6 (7-4), 6-3 ರಲ್ಲಿ ನೇರ ಸೆಟ್ಗಳಲ್ಲಿ ಗೆದ್ದು ಎರಡನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದು ಚಾಂಪಿಯನ್ ಆಗಿದ್ದಾರೆ. * ಈ ಮೂಲಕ ಮೂರು ಗ್ರ್ಯಾನ್ಸ್ಲಾಮ್ಗಳನ್ನು ಗೆದ್ದ ಮೊದಲ ಇಟಾಲಿಯನ್ ಟೆನಿಸ್ ಆಟಗಾರನಾಗಿ ಸಿನ್ನರ್ ಇತಿಹಾಸ ನಿರ್ಮಿಸಿದ್ದಾರೆ.* ಇನ್ನೂ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಯುಎಸ್ ಆಟಗಾರ್ತಿ ಮ್ಯಾಡಿಸನ್ ಕೀಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಸಬಲೆಂಕಾ ವಿರುದ್ಧ ಗೆದ್ದು ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಮ್ಯಾಡಿಸನ್ ಕೀಸ್ ಮುಡಿಗೇರಿಸಿಕೊಂಡಿದ್ದರು.* 23ರ ಹರೆಯದ ಸಿನ್ನರ್ ಅವರು 1992-93ರ ನಂತರ ಸತತ 2ನೇ ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ ಗೆದ್ದಿರುವ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡರು. 1992-93ರಲ್ಲಿ ಜಿಮ್ ಕೋರಿಯರ್ ಈ ಸಾಧನೆ ಮಾಡಿದ್ದರು.* ನೊವಾಕ್ ಜೊಕೊವಿಕ್ ಅವರು 10 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.* ಸಿನ್ನರ್ ಮೂರು ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಎತ್ತಿ ಹಿಡಿದ ಇಟಲಿಯ ಮೊದಲ ಆಟಗಾರನೆಂಬ ಹಿರಿಮೆಗೂ ಪಾತ್ರರಾದರು.* ಝ್ವೆರೆವ್ರನ್ನು ಮಣಿಸುವ ಮೂಲಕ ಸಿನ್ನರ್ ಅವರು 2005-2006ರಲ್ಲಿ ರಫೆಲ್ ನಡಾಲ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ನಡಾಲ್ 2005-2006ರಲ್ಲಿ ತನ್ನ ಚೊಚ್ಚಲ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆದ್ದ 1 ವರ್ಷದ ನಂತರ ಅದೇ ಟೂರ್ನಿಯಲ್ಲಿ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದರು.