Job Description: * ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ‘ನಂದಿನಿ ಹಾಲು’ ಹಾಗು ಹಾಲಿನ ಉತ್ಪನ್ನಗಳು ದೇಶದ ಬೇರೆ ಬೇರೆ ರಾಜ್ಯಗಳಿಗೂ ವಿಸ್ತರಿಸಿದ್ದು, ದೇಶದ 6 ರಾಜ್ಯಗಳಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಿಸಿಕೊಂಡು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.* ಹೈದರಾಬಾದ್‌ಗೆ ಹಾಸನದಿಂದ, ಚೆನ್ನೈ ಮತ್ತು ಕೇರಳಕ್ಕೆ ಮೈಸೂರಿನಿಂದ, ತಮಿಳುನಾಡಿನ ನೀಲಗಿರಿ ಕೇರಳಕ್ಕೆ ಚಾಮರಾಜನಗರದಿಂದ, ಗೋವಾ ಮತ್ತು ಪುಣೆಗೆ ಬೆಳಗಾವಿಯಿಂದ, ವಿದರ್ಭ ಮತ್ತು ಸೊಲ್ಲಾಪುರಕ್ಕೆ (ಮಹಾರಾಷ್ಟ್ರ) ವಿಜಯಪುರದಿಂದ ಹಾಲು ಪೂರೈಕೆಯಾಗುತ್ತಿದೆ.* ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆ.ಎಂ.ಎಫ್) ‘ನಂದಿನಿ ಬ್ರಾಂಡ್’ ವಿಸ್ತರಿಸುವ ಉದ್ದೇಶದಿಂದ ರಾಜ್ಯದ ವಿವಿಧ ಹಾಲು ಉತ್ಪಾದಕರ ಒಕ್ಕೂಟಗಳಿಂದ 6 ರಾಜ್ಯಗಳಿಗೆ ನಿತ್ಯ 4.35 ಲಕ್ಷ ಲೀಟರ್ ಹಾಲು, 66 ಸಾವಿರ ಲೀಟ‌ರ್ ಮೊಸರು ಪೂರೈಸುತ್ತಿದೆ. ಇದರಿಂದ ನಿತ್ಯ 2.47 ಕೋಟಿ ವಹಿವಾಟು ನಡೆಸುತ್ತಿದೆ. ತಿಂಗಳಿಗೆ ಸರಾಸರಿ 75 ಕೋಟಿ ವಹಿವಾಟು ಇದೆ.* ಭಾರತದಲ್ಲಿ ರೈತರ ಉಪಕಸುಬು ಪಶುಸಂಗೋಪನೆ, ಗುಜರಾತ್‌ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಆರಂಭಿಸಿದರು. ತಾನು ಹಿಂದೆ ಪಶುಸಂಗೋಪನಾ ಸಚಿವನಾಗಿ, ಕರ್ನಾಟಕ ಹಾಲು ಮಹಾ ಮಂಡಲದ ಅಧ್ಯಕ್ಷನೂ ಆಗಿ ಕೆಲಸ ಮಾಡಿದ್ದೆ. ಈಗ ದೇಶದ ರಾಜಧಾನಿ ದೆಹಲಿ ನಗರಕ್ಕೂ ಕರ್ನಾಟಕದ ಹಾಲು ಪೂರೈಕೆ ಶುರುವಾಗಿದೆ. ಮಂಡ್ಯ, ಕೆಎಂಎಫ್‌ನಿಂದ ಹಾಲು ಪೂರೈಕೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.* ಕರ್ನಾಟಕದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀಟರ್‌ಗೆ 32 ರೂಪಾಯಿಗೆ ಹಾಲು ಖರೀದಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂಪಾಯಿ ಪ್ರೋತ್ಸಾಹಧನವನ್ನು ನೀಡುತ್ತಿದೆ. * ನಿತ್ಯ ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲಿರುವ 15 ಹಾಲು ಒಕ್ಕೂಟಗಳ ಪೈಕಿ ಬೆಂಗಳೂರು (ಪ್ರಥಮ), ಹಾಸನ (ದ್ವಿತೀಯ), ಕೋಲಾರ (ತೃತೀಯ) ಹಾಗೂ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) 4ನೇ ಸ್ಥಾನದಲ್ಲಿದೆ. ಮೈಸೂರು 6ನೇ ಸ್ಥಾನ ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ 9ನೇ ಸ್ಥಾನದಲ್ಲಿದೆ.* ಹಾಲು ಸಂಗ್ರಹಣೆಯಲ್ಲಿ ಹಾಲು ಒಕ್ಕೂಟಗಳ ಶ್ರೇಯಾಂಕ ಪಟ್ಟಿ :1. ಬೆಂಗಳೂರು - 15.512.ಹಾಸನ - 13.043. ಕೋಲಾರ - 11.344. ಮಂಡ್ಯ - 10.295. ತುಮಕೂರು - 8.826. ಮೈಸೂರು - 8.357. ಶಿವಮೊಗ್ಗ - 7.238. ದಕ್ಷಿಣ ಕನ್ನಡ - 3.439. ಚಾಮರಾಜನಗರ - 2.6810. ಬಳ್ಳಾರಿ - 2.1211. ಬೆಳಗಾವಿ 1.9612. ವಿಜಯಪುರ - 1.6513. ಧಾರವಾಡ - 1.5014. ಹಾವೇರಿ - 1.4915. ಕಲಬುರ್ಗಿ - 0.66