* ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಒಟ್ಟು 64.64 ಕೋಟಿ ಮತದಾರರು ಮತ ಚಲಾಯಿಸಿದ್ದು, ಈ ಪೈಕಿ ಶೇ.65.78ರಷ್ಟು ಮಹಿಳೆಯರು ಹಾಗೂ ಶೇ.65.55ರಷ್ಟು ಪುರುಷರು ಎಂದು ಕೇಂದ್ರೀಯ ಚುನಾವಣಾ ಆಯೋಗ ತಿಳಿಸಿದೆ.* ಮತದಾನದಲ್ಲಿ ಪುರುಷ ಮತದಾರರಿಗೆ ಹೋಲಿಸಿದರೆ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವುದಾಗಿ ಆಯೋಗ ಬಿಡುಗಡೆ ಮಾಡಿದ ಅಂಕಿ-ಅಂಶಗಳಿಂದ ತಿಳಿದುಬಂದಿದೆ.* ಲೋಕಸಭೆ ಚುನಾವಣೆಯ ಜತೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭೆ ಚುನಾವಣೆಗಳು ಜರುಗಿದ್ದವು. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. 118 ಮಂದಿ ಮಹಾರಾಷ್ಟ್ರದಲ್ಲಿ, 80 ಮಂದಿ ಉತ್ತರಪ್ರದೇಶದಲ್ಲಿ ಹಾಗೂ 77 ಮಂದಿ ತಮಿಳುನಾಡಿನಲ್ಲಿ ಕಣದಲ್ಲಿದ್ದರು. ಒಟ್ಟಾರೆ ಲೋಕಸಭೆ ಕ್ಷೇತ್ರಗಳಲ್ಲಿ 152ರಲ್ಲಿ ಮಹಿಳಾ ಅಭ್ಯರ್ಥಿಗಳೇ ಚುನಾವಣಾ ಕಣದಲ್ಲಿ ಇರಲಿಲ್ಲ ಎನ್ನುವುದು ಗಮನಾರ್ಹ.* ಭಾರತದ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಗಳ ಕುರಿತು 42 ಅಂಕಿಅಂಶಗಳ ವರದಿಗಳನ್ನು ಮತ್ತು ನಾಲ್ಕು ಏಕಕಾಲದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳ ಕುರಿತು ತಲಾ 14 ವರದಿಗಳನ್ನು ಬಿಡುಗಡೆ ಮಾಡಿದೆ.* ಈ ವರ್ಷ 8,000ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರೆ, 2019ರಲ್ಲಿ ಈ ಸಂಖ್ಯೆ 8,054 ಆಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.* 2019ರ ಚುನಾವಣೆಗೆ ಹೋಲಿಸಿದರೆ, ತೃತೀಯ ಲಿಂಗದ ಮತದಾರರ ಸಂಖ್ಯೆ ಶೇಕಡಾ 46.4ಕ್ಕಿಂತ ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ.