* ಸರಕು ಮತ್ತು ಸೇವಾ ತೆರಿಗೆ(GST) ಮೂಲಕ 2024ರ ಡಿಸೆಂಬರ್ನಲ್ಲಿ ₹1.77 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.* 2023ರ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ 7.3ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ(ಜನವರಿ 01) ತಿಳಿಸಿದೆ.* 1,76,857 ಕೋಟಿ ರೂ ಒಟ್ಟು ಜಿಎಸ್ಟಿ ಸಂಗ್ರಹದಲ್ಲಿ ಕೇಂದ್ರದ ಜಿಎಸ್ಟಿ 32,836 ಕೋಟಿ ರೂ ಇದೆ. ರಾಜ್ಯ ಜಿಎಸ್ಟಿ 40,499 ಕೋಟಿ ರೂ, ಐಜಿಎಸ್ಟಿ 47,783 ಕೋಟಿ ರೂ, ಹಾಗೂ ಸೆಸ್ 11,471 ಕೋಟಿ ರೂ ಆಗಿದೆ.* 2024ರ ಡಿಸೆಂಬರ್ ತಿಂಗಳಲ್ಲಿ ಆಂತರಿಕ ವಹಿವಾಟುಗಳ ಮೂಲಕ ಸಂಗ್ರಹವಾದ ಜಿಎಸ್ಟಿ 1.32 ಲಕ್ಷ ಕೋಟಿ ರೂ. ಹಿಂದಿನ ವರ್ಷದಕ್ಕಿಂತ ಇದರಲ್ಲಿ ಶೇ. 8.4ರಷ್ಟು ಹೆಚ್ಚಳ ಆಗಿದೆ. ಇನ್ನು, ಆಮದುಗಳಿಂದ ಬಂದಿರುವ ತೆರಿಗೆ 44,268 ಕೋಟಿ ರೂ ಇದೆ.* 2024ರಲ್ಲಿ ಕೊನೆಯ ನಾಲ್ಕು ತಿಂಗಳ ಜಿಎಸ್ಟಿ ಸಂಗ್ರಹ:ಸೆಪ್ಟೆಂಬರ್: ₹ 1,73,240 ಕೋಟಿ ಅಕ್ಟೋಬರ್: ₹ 1,87,346 ಕೋಟಿನವೆಂಬರ್: ₹ 1,82,269 ಕೋಟಿ ಡಿಸೆಂಬರ್: ₹ 1,76,857 ಕೋಟಿ* 2024-25 ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ (ಏಪ್ರಿಲ್ನಿಂದ ಡಿಸೆಂಬರ್) 16,33,569 ಕೋಟಿ ರೂ ಜಿಎಸ್ಟಿ ಸಂಗ್ರಹವಾಗಿದೆ.* ಕಳೆದ ವರ್ಷದಕ್ಕಿಂತ ಶೇ. 9.10ರಷ್ಟು ಹೆಚ್ಚು ತೆರಿಗೆ ಬಂದಿದೆ. ಆದರೆ 2024-25ರ ಹಣಕಾಸು ವರ್ಷಕ್ಕೆ ನಿಗದಿ ಪಡಿಸಿರುವ ಗುರಿಗಿಂತ ಜಿಎಸ್ಟಿ ಸಂಗ್ರಹ ಶೇ. 19ರಷ್ಟು ಕಡಿಮೆ ಇದೆ.