* ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಕಲಹ ಮತ್ತು ರಾಜಕೀಯ ಅಸ್ಥಿರತೆಯ ಹೊರತಾಗಿಯೂ ಸ್ಥಳೀಯ ಸಂಸ್ಕೃತಿ ಹಾಗೂ ಸಂಪ್ರದಾಯದಂತೆ ಜನರು ಹೊಸ ವರ್ಷವನ್ನು ಸ್ವಾಗತಿಸಿದರು.* ದಕ್ಷಿಣ ಪೆಸಿಫಿಕ್ ರಾಷ್ಟ್ರಗಳು ಮೊದಲಿಗೆ ಹೊಸ ವರ್ಷವನ್ನು ಆಚರಿಸಿದರು. ನ್ಯೂಜಿಲೆಂಡ್ನ ಪ್ರಮುಖ ನಗರವಾದ ಆಕ್ಲೆಂಡ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.* ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಾ ಚರಣೆ ಸಂಭ್ರಮದಿಂದ ನಡೆಯಿತು. ಸಿಡ್ನಿ ಬಂದರಿನಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಸುಡುಮದ್ದು ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು.* ಬ್ರಿಟನ್ನ ಪಾಪ್ಸ್ಟಾರ್ ರಾಬ್ಬಿ ವಿಲಿಯಮ್ಸ್ ಕಾರ್ಯಕ್ರಮ ನಡೆಸಿಕೊಟ್ಟರು. ಜಪಾನ್ನಲ್ಲಿ ದೇವಾ ಲಯವನ್ನು ಸ್ವಚ್ಛ ಗೊಳಿಸುವ ಮೂಲಕ ಹೊಸ ವರ್ಷ ಆಚರಿಸಲಾಯಿತು.* ಕ್ರಿಸ್ಮಸ್ ದ್ವೀಪ ಅಥವಾ ಕಿರಿಟಿಮತಿ ಎಂದೂ ಕರೆಯಲ್ಪಡುವ ಒಂದು ಸಣ್ಣ ದ್ವೀಪವು ಹೊಸ ವರ್ಷವನ್ನು ಮೊದಲು ಸ್ವಾಗತಿಸುತ್ತದೆ.* ಉತ್ತರ ರೇಖೆಯ ದ್ವೀಪಗಳಲ್ಲಿನ ಪೆಸಿಫಿಕ್ ಮಹಾಸಾಗರದ ಹವಳ ದ್ವೀಪವು ವರ್ಷದ ತಿರುವನ್ನು ಮೊದಲು 5 am EST ಅಂದರೆ ಭಾರತೀಯ ಕಾಲಮಾನ ಡಿಸೆಂಬರ್ 31ರ ಮಧ್ಯಾಹ್ನ 3:30ಕ್ಕೆ 2025ನ್ನು ಸ್ವಾಗತಿಸುತ್ತದೆ.* 2025 ರಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಕೊನೆಯ ದೇಶ ಅಮೇರಿಕನ್ ಸಮೋವಾ. ಜನವರಿ 1, 2025 ರಂದು ರಾತ್ರಿ 11:00 PM UTC ಕ್ಕೆ ಸ್ವಾಗತಿಸುತ್ತದೆ. ಇದು ಹೊಸ ವರ್ಷದ ಆಗಮನವನ್ನು ಆಚರಿಸುವ ಕೊನೆಯ ಸ್ಥಳವಾಗಿದೆ.* ಜೆಜು ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನವೊಂದು ಡಿಸೆಂಬರ್29 ರಂದು ಪತನಗೊಂಡು 179 ಮಂದಿ ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾದಾದ್ಯಂತ ಶೋಕಾಚರಣೆ ಘೋಷಿಸಲಾಗಿದ್ದು, ಹೊಸ ವರ್ಷ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.