* ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ದೆಹಲಿ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಲಾಜಿಸ್ಟಿಕ್ಸ್ ಇಂಡೆಕ್ಸ್ ಚಾರ್ಟ್ 2024 ರಲ್ಲಿ "ಸಾಧಕರು" ಎಂದು ವರ್ಗೀಕರಿಸಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಜನವರಿ 03 ರಂದು (ಶುಕ್ರವಾರ) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. * ಸೂಚ್ಯಂಕವು ರಫ್ತು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಅಗತ್ಯವಾದ ಲಾಜಿಸ್ಟಿಕಲ್ ಸೇವೆಗಳ ದಕ್ಷತೆಯ ಸೂಚಕವಾಗಿದೆ.* ಸರಕು ಸಾಗಣೆಗೆ ಸಂಬಂಧಿಸಿದ ಮೂಲಸೌಕರ್ಯ, ಸೇವೆ, ಕಾರ್ಯಾಚರಣೆ, ನಿಯಂತ್ರಣ ವ್ಯವಸ್ಥೆ ಹಾಗೂ ಸುಸ್ಥಿರ ಸಾಗಣೆ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ.* ಸಚಿವಾಲಯವು ಸರಕು ಸಾಗಣೆ ಸಾಧನೆ ಸೂಚ್ಯಂಕ-2024 ಅನ್ನು ಬಿಡುಗಡೆ ಮಾಡಿದೆ. ಈ ಸೂಚ್ಯಂಕವು ದೇಶದ ವ್ಯಾಪಾರ ರಫ್ತು ಹಾಗೂ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲು ಅಗತ್ಯವಾದ ಸರಕು ಸಾಗಣೆ ಸೇವೆಯ ಸೂಚಕವಾಗಿದೆ.* 2023ರಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಮತ್ತು ಆಕಾಂಕ್ಷಿ ಪಟ್ಟಿಯಲ್ಲಿದ್ದ ಮಹಾರಾಷ್ಟ್ರ, ಒಡಿಶಾ, ಉತ್ತರಾಖಂಡ, ಅರುಣಾಚಲ ಪ್ರದೇಶದಲ್ಲಿ ಸರಕು ಸಾಗಣೆ ವ್ಯವಸ್ಥೆ ಸುಧಾರಣೆ ಕಂಡಿದ್ದು 'ಸಾಧಕ' ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪಂಜಾಬ್ ಒಂದು ಸ್ಥಾನ ಕಳೆಗಿಳಿದಿದ್ದು, ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ಪಟ್ಟಿಗೆ ಸೇರ್ಪಡೆಗೊಂಡಿದೆ.- ಸಾಧಕ ಪಟ್ಟಿ: ಗುಜರಾತ್ ಕರ್ನಾಟಕ ಮಹಾರಾಷ್ಟ್ರ ಒಡಿಶಾ ತಮಿಳುನಾಡು ದೆಹಲಿ ಚಂಡೀಗಢ ಹರಿಯಾಣ ತೆಲಂಗಾಣ ಉತ್ತರ ಪ್ರದೇಶ ಉತ್ತರಾಖಂಡ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ. - ವೇಗವಾಗಿ ಬೆಳವಣಿಗೆ ಸಾಧನೆ ಪಟ್ಟಿ: ಆಂಧ್ರಪ್ರದೇಶ ಗೋವಾ ಬಿಹಾರ ಹಿಮಾಚಲ ಪ್ರದೇಶ ಪಂಜಾಬ್ ರಾಜಸ್ಥಾನ ಮೇಘಾಲಯ ಮಿಜೋರಾಂ ನಾಗಾಲ್ಯಾಂಡ್ ಸಿಕ್ಕಿಂ ತ್ರಿಪುರಾ ದಾದ್ರಾ ಮತ್ತು ನಗರ್ ಹವೇಲಿ ದಮನ್ ಮತ್ತು ಡಿಯು ಜಮ್ಮು ಮತ್ತು ಕಾಶ್ಮೀರ ಲಕ್ಷದ್ವೀಪ ಪುದುಚೇರಿ. - ಆಕಾಂಕ್ಷಿ ಪಟ್ಟಿ: ಕೇರಳ ಪಶ್ಚಿಮ ಬಂಗಾಳ ಛತ್ತೀಸಗಢ, ಜಾರ್ಖಂಡ್ ಅಂಡಮಾನ್ ಮತ್ತು ನಿಕೋಬಾರ್, ಲಡಾಖ್