Loading..!

Back
ಪ್ರಶ್ನೋತ್ತರ ಮಾಲಿಕೆ ಭಾಗ ೧

| Published on: 27 ನವೆಂಬರ್ 2018

Image not found

ಆತ್ಮೀಯ ಸ್ಪರ್ಧಾರ್ಥಿಗಳೇ, ನಿಮಗೆ ಗೊಂದಲವಿರುವ ಹಲವಾರು ಪ್ರಶ್ನೆಗಳನ್ನು ನೀವು ಈಗಾಗಲೇ ನಮ್ಮ ಜಾಲತಾಣದ contact us ವಿಭಾಗದ ಮೂಲಕ ಹಂಚಿಕೊಂಡಿದ್ದೀರಿ ಮತ್ತು ನಮಗೆ ತಿಳಿದ ಉತ್ತರಗಳನ್ನು ನೀಡಿದ್ದೇವೆ. ಹೀಗಾಗಿ ನೀವು ನಮ್ಮ ಉತ್ತರಗಳಿಂದ ನಿಮ್ಮ ಪ್ರಶ್ನೆಗೆ ಪರಿಹಾರ ಕಂಡುಕೊಂಡಿದ್ದೀರಿ ಎಂದು ಭಾವಿಸಿದ್ದೇವೆ, ಮತ್ತು ಈ ಒಂದು ಬ್ಲಾಗ್ ನ ಮೂಲಕ ಆ ಎಲ್ಲ ಪ್ರಶ್ನೆಗಳನ್ನು ಮತ್ತು ನಾವು ನೀಡಿದ ಉತ್ತರಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸುತ್ತಿದ್ದೇವೆ ಈ ನಿಮ್ಮ ಪ್ರಶ್ನೆಗಳೇ ಮತ್ತೊಬ್ಬರ ಪ್ರಶ್ನೆಯಾಗಿರಬಹುದು ಅವರು ಈ ಬ್ಲಾಗ್ ನ ಮೂಲಕ ಉತ್ತರ ಕಂಡುಕೊಳ್ಳಲಿ ಎಂಬುದು ನಮ್ಮ ಉದ್ದೇಶ.
*ಪ್ರಶ್ನೋತ್ತರಗಳನ್ನು ಭಾಷಾಂತರಿಸಲಾಗಿದೆ.

ಪ್ರಶ್ನೆ 1 -ಕರ್ನಾಟಕದಲ್ಲಿ ಉಚಿತವಾಗಿ ತರಬೇತಿ ನೀಡುವ ಯಾವುದಾದರೂ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಬಗ್ಗೆ ಮಾಹಿತಿ ನೀಡಿ -ಸುಭಾಷ್ ಸುಭಾಸ ಅವರೇ, ರಾಜ್ಯದಲ್ಲಿ ಯಾವುದೇ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಕೂಡ ಉಚಿತವಾಗಿ ತರಬೇತಿಯನ್ನು ನೀಡುವುದಿಲ್ಲ, ಆದರೆ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಪ್ರತಿ ವರ್ಷ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಐಎಎಸ್ ಕೆಎಎಸ್ ಮತ್ತು ಬ್ಯಾಂಕಿಂಗ್ ಪರೀಕ್ಷೆಗಳಿಗಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಿಗೆ ಉಚಿತವಾಗಿ ನೇಮಿಸುತ್ತದೆ. ಈ ಸಂಬಂಧಪಟ್ಟ ಶುಲ್ಕವನ್ನು ಆಯಾ ಇಲಾಖೆಗಳೇ ಬರಿಸುತ್ತವೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಜೊತೆ ಅಧ್ಯಯನದ ಸಾಮಗ್ರಿ (ಸ್ಟಡಿ ಮೆಟಿರಿಯಲ್ಸ್)ಯನ್ನು ತರಬೇತಿ ಸಂಸ್ಥೆಯಿಂದ ಮತ್ತು ಒಂದು ಸಮಯಕ್ಕೆ ಆಗುವಷ್ಟು ಪ್ರಯಾಣ ಭತ್ಯೆಯನ್ನು ಇಲಾಖೆಗಳೇ ಭರಿಸುತ್ತವೆ. ಈ ಕುರಿತು ಆಯಾ ಇಲಾಖೆಗಳ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ವಿವರಗಳನ್ನು ಪರಿಶೀಲಿಸಿಕೊಳ್ಳಿ ಮತ್ತು ಎಚ್ ಡಿ ದೇವೇಗೌಡ ಸಿವಿಲ್ ಸರ್ವಿಸ್ ಅಕಾಡೆಮಿ ಬೆಂಗಳೂರು ಇವರು ಕೂಡ ಇದೇ ಮಾದರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಉಚಿತವಾಗಿ ತರಬೇತಿ ನೀಡುವರೆಂದು ತಿಳಿದು ಬಂದಿದೆ ಹೀಗಾಗಿ ಈ ಸಂಸ್ಥೆಯ ಜಾಲತಾಣ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.
ಪ್ರಶ್ನೆ 2- ರಾಜ್ಯ ಪೊಲೀಸ್ ಇಲಾಖೆಯ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕಳುಹಿಸಿಕೊಡಿ -ಮನು ಗೋಪಾಲ್ ಮನು ಗೋಪಾಲ್ ಅವರೇ ಈಗಾಗಲೇ ನಮ್ಮ ಜಾಲತಾಣದ question paper section(ಪ್ರಶ್ನೆ ಪತ್ರಿಕೆ ವಿಭಾಗ) ನಲ್ಲಿ ಹಲವಾರು ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹವಿದೆ. ರಾಜ್ಯ ಪೊಲೀಸ್ ಇಲಾಖೆಯ ಹಳೆಯ ಪ್ರಶ್ನೆ ಪತ್ರಿಕೆಗಳಿಗಾಗಿ ನೀವು ನಮ್ಮ ಜಾಲತಾಣದ ಪ್ರಶ್ನೆ ಪತ್ರಿಕೆ ವಿಭಾಗದ ಮೂಲಕ ಪಡೆಯಬಹುದು ಮತ್ತು ಅಲ್ಲಿ ನಿಮಗೆ 2 ಉಪವಿಭಾಗಗಳು ಕಾಣಸಿಗುತ್ತವೆ ಒಂದು ಪೊಲೀಸ್ ಸಬ್ ಇಸ್ಪೇಕ್ಟರ್(PSI) ಮತ್ತೊಂದು ಪೊಲೀಸ್ ಕಾನ್ಸ್ಟೇಬಲ್(PC) ನಿಮಗೆ ಬೇಕಾದ ವಿಭಾಗದಿಂದ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಸ್ನೇಹಿತರೆ, ಇದೇ ವಿಭಾಗದಲ್ಲಿ ವಿವಿಧ ಇಲಾಖೆಗಳ ಪ್ರಶ್ನೆ ಪತ್ರಿಕೆಗಳಿದ್ದು ಅವುಗಳ ಸಂಗ್ರಹ ನೀವು ಪಡೆಯಬಹುದು.
ಪ್ರಶ್ನೆ 3- ಸರ್ KPSC ಯ ಪರೀಕ್ಷೆಗಳ syllabus(ಸಿಲ್ ಬಸ್) ಸಿಗುತ್ತಾ -ಸುನಿಲಕುಮಾರ್ ಸುನಿಲ ಅವರೇ kpsc ಯು ತಾನು ನಡೆಸುವ ಬಹುತೇಕ ಎಲ್ಲ ಪರೀಕ್ಷೆಗಳ ಸಿಲಬಸ್ ಅನ್ನು ಅಧಿಕೃತವಾಗಿ ತನ್ನ ಜಾಲತಾಣದಲ್ಲೇ ಪ್ರಕಟಿಸಿದೆ ಹೀಗಾಗಿ ನೀವು kspc ಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮಗೆ ಬೇಕಾದ ಹುದ್ದೆಯ ಪರೀಕ್ಷಾ ಸಿಲಬಸ್ ನ್ನು ಪಡೆಯಬಹುದು.
ಪ್ರಶ್ನೆ 4- ದಯವಿಟ್ಟು ಇಂಟೆಲಿಜೆನ್ಸ್(intelligence) ಮತ್ತು ಡಿಟೆಕ್ಟಿವ್(detective) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ 2018 ನೇ ಸಾಲಿನ ಪ್ರಶ್ನೆ ಪತ್ರಿಕೆ ಅಪ್ಲೋಡ್ ಮಾಡಿ -ಶ್ರೇಯಶ್ M ಶ್ರೇಯಶ್ ಅವರೇ ಈ ಪ್ರಶ್ನೆ ಪತ್ರಿಕೆಗಳನ್ನು ಈಗಾಗಲೇ ಸಂಗ್ರಹಿಸಿದ್ದು ಇನ್ನೇನು ಅಪ್ಲೋಡ್ ಮಾಡುವುದಷ್ಟೇ ಬಾಕಿ ಇರುವುದರಿಂದ ಅವುಗಳನ್ನು ನೀವು ನಿರೀಕ್ಷಿಸಬಹುದು.
ಪ್ರಶ್ನೆ 5- ಉದ್ಯೋಗ ಮಾಹಿತಿ ನೀಡಿ ಎಂದು ಬಹುಪಾಲು ಜನರು ಕೇಳುತ್ತಿದ್ದಾರೆ ಸ್ನೇಹಿತರೆ, ನಮ್ಮ ಜಾಲತಾಣದ/ಮೊಬೈಲ್-ಅಪ್ಲಿಕೇಶನ್ ಮುಖಪುಟದಲ್ಲಿ ಈಗಾಗಲೇ ಉದ್ಯೋಗ ಮಾಹಿತಿಯನ್ನು ಪ್ರಕಟಿಸುತ್ತಿದ್ದೇವೆ. ಹಾಗಾಗಿ ಸ್ಪರ್ಧಾರ್ಥಿಗಳು ಇದನ್ನು ಸರಿಯಾಗಿ ಗಮನಿಸಿ, ಮತ್ತು ಜಾಬ್ ನ್ಯೂಸ್ (Job News) ವಿಭಾಗಕ್ಕೆ ಭೇಟಿ ನೀಡಿದರೆ ಅಲ್ಲಿ ಎಲ್ಲ ಉದ್ಯೋಗಗಳ ಮಾಹಿತಿ ಸಂಪೂರ್ಣವಾಗಿ ಲಭಿಸುತ್ತದೆ. 
ಪ್ರಶ್ನೆ 6- ಬಹುಪಾಲು ಜನರು ವಿವಿಧ ಇಲಾಖಾ ಅಧಿಸೂಚನೆಗಳ cutoff list/provisional list/key-answers/revised-key answer/exam dates ಗಳು ಯಾವಾಗ ಬರುತ್ತವೆ ಎಂದು ಕೇಳುತ್ತಿರುತ್ತೀರಿ. ಸ್ನೇಹಿತರೆ, ಈ ಕುರಿತ ಮಾಹಿತಿಗಳನ್ನು ನಾವು ಹೊಂದಿರುವದಿಲ್ಲ ಮತ್ತು ಇಲಾಖೆಗಳು ಅಧಿಕೃತವಾಗಿ ಪ್ರಕಟಿಸಿದಾಗ ಮಾತ್ರ ನಾವು ನಿಮಗೆ ತಿಳಿಸುತ್ತೇವೆಯೇ ಹೊರತು ಅವುಗಳು ಪ್ರಕಟಗೊಳ್ಳುವ ದಿನಾಂಕಗಳ ಮಾಹಿತಿ ಇಲಾಖೆಗಳಿಗೆ ಸರಿಯಾಗಿ ತಿಳಿದಿದಿರುವಾಗ ನಾವು ಹೇಗೆ ಆ ಕುರಿತ ಮಾಹಿತಿ ನೀಡಬೇಕು ನಿವೇಹೇಳಿ. ಇನ್ನೂ ಸುಮಾರು ಪ್ರಶ್ನೆಗಳನ್ನು ಸ್ಪರ್ಧಾರ್ಥಿಗಳು ನಮಗೆ ಕಳುಹಿಸಿದ್ದಾರೆ. ಸಮಯದ ಅಭಾವದಿಂದಾಗಿ ಅವುಗಳನ್ನು ಈಗ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಬರುವ ದಿನಗಳ ಮುಂದಿನ ಭಾಗದಲ್ಲಿ ಉತ್ತರ ಸಮೇತ ಅವುಗಳನ್ನು ಪ್ರಕಟಿಸಲಾಗುವದು.
References: KPSC Vaani Question Answers